ಪ್ರೌಢಶಾಲಾ ಬ್ಯಾಡ್ಮಿಂಟನ್ ಸ್ಪರ್ಧೆ: ವಿಜೇತರಿಗೆ ಅಭಿನಂದನೆನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ತಾಲೂಕು ಮಟ್ಟದ ವಿವಿಧ ಕ್ರೀಡೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, 14 ಮತ್ತು 17 ವರ್ಷ ವಯಸ್ಸಿನ ಬಾಲಕ, ಬಾಲಕಿಯರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಾಲೂಕಿನ ಸುಮಾರು 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಸಂತಸ ವ್ಯಕ್ತಪಡಿಸಿ, ವಿಜೇತ ತಂಡವನ್ನು ಅಭಿನಂದಿಸಿದರು.