• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • chitradurga

chitradurga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಐದು ಕೋಟಿ ಸುರಿಯೋಕೆ ರಾತ್ರೋ ರಾತ್ರಿ ಕೆರೆ ತೂಬಿಗೆ ಹಾನಿ
ದುಬಾರಿ ವೆಚ್ಚದಲ್ಲಿ ಸಾರ್ವಜನಿಕ ತಂಗುದಾಣಗಳ ನಿರ್ಮಿಸಿ ಸರ್ಕಾರಿ ಅನುದಾನ ಅಪವ್ಯಯಕ್ಕೆ ಕಾರಣವಾಗಿದ್ದ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ(CUDA), ಮುರುಘಾಮಠದ ಮುಂಭಾಗದ ಕೆರೆ ಅಭಿವೃದ್ಧಿ ಪಡಿಸಲು ಮತ್ತೊಂದು ಅನುದಾನ ಅಪವ್ಯಯದ ಘನಂದಾರಿ ಕೆಲಸಕ್ಕೆ ಮತ್ತೆ ಮರು ಚಾಲನೆ ನೀಡಿದೆ.
ಜಾತಿ ಜನಗಣತಿಗೆ ಬಿಜೆಪಿ ವಿರೋಧಿಸಲ್ಲ: ಆರ್. ಅಶೋಕ್
ಜಾತಿ ಜನಗಣತಿಯ ಬಿಜೆಪಿ ವಿರೋಧಿಸುವುದಿಲ್ಲ. ಆದರೆ ಜಾತಿಜನಗಣತಿ ವೈಜ್ಞಾನಿಕವಾಗಿ ಆಗಬೇಕೆಂಬುದೇ ನಮ್ಮ ನಿಲುವು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು. ಶುಕ್ರವಾರ ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿಯನ್ನು ಕಾಂಗ್ರೆಸ್ ತಮ್ಮ ಹಿಂದಿನ ಅಧಿಕಾರ ಅವಧಿಯಲ್ಲಿ ಮಾಡಬಹುದಾಗಿತ್ತು. ಆಗ ಸುಮ್ಮನಿದ್ದು ಈಗ ಮುನ್ನಲೆಗೆ ತರುವ ಯತ್ನ ಮಾಡುತ್ತಿದೆ. ಜಾತಿ ಜನಗಣಿತಿಯ ಕಾಂಗ್ರೆಸ್ ನ ಒಕ್ಕಲಿಗ, ಲಿಂಗಾಯಿತ ಸಚಿವರೇ ವಿರೋಧಿಸಿದ್ದಾರೆ ಎಂದರು.
ವಿವಿಗಳಲ್ಲಿ ಮೂಲ ಸೌಕರ್ಯ ಕೊರತೆ ನಿವಾರಣೆಗೆ ಆಗ್ರಹ
ರಾಜ್ಯದ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯ ಕೊರತೆ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶುಕ್ರವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಾಂತರಾಜ್ ವರದಿ ಜಾರಿಯಾಗಲಿ
ಪರಿಶಿಷ್ಟರಿಗೆ ಶೀಘ್ರ ಒಳ ಮೀಸಲಾತಿ ಜಾರಿಗೊಳಿಸುವುದರ ಜತೆಗೆ ಕಾಂತರಾಜ್ ನೇತೃತ್ವದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 (ಜಾತಿ ಜನಗಣತಿ) ವರದಿ ಬಿಡುಗಡೆ ಮಾಡುವಂತೆ ಅಹಿಂದ ಸಮುದಾಯಗಳ ಮುಖಂಡರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸ್ವಂತ ಮನೆ ಕಟ್ಟಿಕೊಳ್ಳುವ ವೃದ್ಧ ದಂಪತಿಯ ಕನಸು ನನಸು
ಸ್ವಂತ ಮನೆ ಕಟ್ಟಿಕೊಳ್ಳಬೇಕೆಂಬ ವೃದ್ಧ ದಂಪತಿಗಳ ನಾಲ್ಕು ದಶಕದ ಕನಸನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಈಡೇರಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಹೇಳಿದರು.
ಮರಣೋತ್ತರ ಪರೀಕ್ಷೆ ಇತ್ತ ಕೊಲೆಯ ಸುಳಿವು
ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಯಾದಲಗಟ್ಟೆ ಗ್ರಾಮದಲ್ಲಿ ಹೊಟ್ಟೆನೋವಿನಿಂದ ಮೃತಪಟ್ಟಿದ್ದಾರೆ ಎಂದು ನಂಬಲಾಗಿದ್ದ ವ್ಯಕ್ತಿಯ ಮರಣೋತ್ತರ ವರದಿಯಲ್ಲಿ ಅಸಹಜ ಸಾವು ಎಂದು ಹೇಳಲಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ. ಸೆ.27ರಂದು ರಾಘವೇಂದ್ರ (35) ಎಂಬುವವರು ಮನೆಯಲ್ಲೆ ಮೃತಪಟ್ಟಿದ್ದಾರೆ. ಅಂದು ಮಧ್ಯಾಹ್ನ ಮೃತ ರಾಘವೇಂದ್ರನ ಹೆಂಡತಿ ದಿವ್ಯ ದೂರವಾಣಿ ಮೂಲಕ ಮೃತನ ಸಹೋದರ ಕೆ.ಒ.ತಿಪ್ಪೇಸ್ವಾಮಿಗೆ, ‘ನಿನ್ನ ತಮ್ಮ ಹೊಟ್ಟೆನೋವು ಎಂದು ಮನೆಯಲ್ಲಿ ನರಳಾಡುತ್ತಿದ್ದಾನೆಂದು’ ತಿಳಿಸಿದ್ದಳು. ಆಗ ಬೆಂಗಳೂರಿನಲ್ಲಿದ್ದ ತಿಪ್ಪೇಸ್ವಾಮಿ ತನ್ನ ಬಂಧುಗಳಿಗೆ ಪೋನ್ ಮಾಡಿ ರಾಘವೇಂದ್ರನ ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ.
ರಸ್ತೆ ಅಗಲೀಕರಣ, ಮೂಲಭೂತ ಸೌಕರ್ಯಕ್ಕೆ ಆಗ್ರಹ
ಚಳ್ಳಕೆರೆ ತಾಲೂಕಿತ ಪರಶುರಾಮರ ಹೋಬಳಿ ವ್ಯಾಪ್ತಿಯ ಅಂಧ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಸಿದ್ದೇಶ್ವರನ ದುರ್ಗ ಗ್ರಾಮ ಪಂಚಾಯಿತಿಯ ಪಿಲ್ಲಹಳ್ಳಿ ಗ್ರಾಮದ ನಾಗಪ್ಪನಹಳ್ಳಿ ಗೇಟ್‌ನಲ್ಲಿ ಪ್ರಯಾಣಿಕರ ತಂಗುದಾಣ, ಕುಡಿಯುವ ನೀರು, ಶೌಚಾಲಯ ಇಲ್ಲದಿರುವುದು ಅತ್ಯಂತ ಶೋಚನೀಯ ಸಂಗತಿ ಎಂದು ಪಿಲ್ಲಹಳ್ಳಿ ಗ್ರಾಮದ ಮುಖಂಡ ಪಿಲ್ಲಹಳ್ಳಿ ಚಿತ್ರಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಒಳಮೀಸಲು ಜಾರಿಗೊಳಿಸಿದಿದ್ದರೆ ಸಿಎಂ ಮನೆಗೆ ಮುತ್ತಿಗೆ
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿ ಅನುಷ್ಠಾನಗೊಳಿಸಿ ಸಾಮಾಜಿಕ ನ್ಯಾಯ ಎತ್ತಿಹಿಡಿಯದಿದ್ದರೆ ಮುಖ್ಯಮಂತ್ರಿ ನಿವಾಸಕ್ಕೆ ಪಾದಯಾತ್ರೆ ತೆರಳಿ ಮುತ್ತಿಗೆ ಹಾಕಲಾಗುವುದೆಂದು ಮಾದಿಗ ದಂಡೋರದ ಮುಖಂಡ ಪಾವಗಡ ಶ್ರೀರಾಮ್ ಎಚ್ಚರಿಸಿದರು.
ದುರ್ಗಾದೇವಿ ಶರನ್ನವರಾತ್ರಿ ಉತ್ಸವ
ದುರ್ಗಾ ಸೇವಾ ಸಮಿತಿ ವತಿಯಿಂದ ಪಟ್ಟಣದ ಅಶೋಕ ರಂಗಮಂದಿರದ ದುರ್ಗಾದೇವಿ ಮಂಟಪದಲ್ಲಿ 7 ನೇ ವರ್ಷದ ಶರನ್ನವರಾತ್ರಿ ಆಚರಣೆ ಅಂಗವಾಗಿ ಸಿಂಹಾರೂಢ ದುರ್ಗಾದೇವಿಯ ಮೂರ್ತಿಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಪ್ರಾರಂಭದಲ್ಲಿ ಪಟ್ಟಣದ ನಗರ ದೇವತೆ ದುರ್ಗಾಂಭಿಕ ದೇವಿಯ ಪೂಜಿಸಿ ಬಂದ ಅರ್ಚಕರಾದ ದೇವಿಪ್ರಸಾದ್‌, ಗಣೇಶ ಭಟ್ಟರು, ಶ್ರೀನಿವಾಸ್‌ ನೇತೃತ್ವದಲ್ಲಿ ವಿವಿಧ ಹೋಮ ಹವನಗಳನ್ನು ನಡೆದವು. ನಂತರ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ, ಪೂಜೆಗೆ ಅವಕಾಶ ಕಲ್ಪಿಸಲಾಯಿತು. ಭಕ್ತರು ಕಕ್ಕೇರಾದ ಶಿಲ್ಪಿ ಜೆಡಿ. ಭಟ್‌ರಿಂದ ತಯಾರಾದ ಸುಂದರ ಮೂರ್ತಿಯ ದರ್ಶನ ಪಡೆಯುವ ಮೂಲಕ ಪುನೀತರಾದರು. ಈ ವೇಳೆ ದುರ್ಗಾ ದೇವಿ ಸಮಿತಿಯ ಅಧ್ಯಕ್ಷ ಮಂಜುನಾಥ್‌ ಸೇರಿದಂತೆ ಪದಾಧಿಕಾರಿಗಳು ಹಾಗು ಭಕ್ತರು ಹಾಜರಿದ್ದರು.
ಮೂರು ದಶಕ ಕಳೆದರೂ ನಮ್ಮ ಹಕ್ಕುಗಳು ಜಾರಿಯಾಗಿಲ್ಲ
ಸೂಕ್ತ ಪ್ರಮಾಣದಲ್ಲಿ ಮೀಸಲಾತಿ ಸಿಗದೇ ವಂಚಿತವಾಗಿರುವ ಸಮುದಾಯಗಳಿಗೆ ಅವಕಾಶ ಕಲ್ಪಿಸಲು ರಾಜ್ಯದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿಯು 1999 ರಲ್ಲಿ ಮೊಟ್ಟ ಮೊದಲ ಬಾರಿಗೆ ಒಳ ಮೀಸಲಾತಿಗೆ ಬೇಡಿಕೆಯಿಟ್ಟು ಹೋರಾಟ ಆರಂಭಿಸಿತು. ಅಲ್ಲಿಂದ ಇಲ್ಲಿಯವರೆಗೆ ಹಲವಾರು ಹೋರಾಟಗಳು ಒಳ ಮೀಸಲಾತಿಗಾಗಿ ನಡೆಯುತ್ತಲೇ ಇದ್ದು, ಮೂರು ದಶಕಗಳು ಕಳೆಯುತ್ತಾ ಬಂದರೂ ನಮ್ಮ ಹಕ್ಕುಗಳ ಜಾರಿಯಾಗಿಲ್ಲ ಎಂದು ಮಾದಿಗ ದಂಡೋರ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ಹೇಳಿದರು.
  • < previous
  • 1
  • ...
  • 191
  • 192
  • 193
  • 194
  • 195
  • 196
  • 197
  • 198
  • 199
  • ...
  • 423
  • next >
Top Stories
ಕಾರ್‍ಯಕ್ರಮಕ್ಕೆ ತಡವಾಗಿದ್ದಕ್ಕೆ ರಾಹುಲ್‌ಗೆ 10 ಪುಷಪ್‌ ಶಿಕ್ಷೆ!
ಆಡ್ವಾಣಿ ಉದಾಹರಿಸಿ ನೆಹರೂ, ಇಂದಿರಾಗೆ ತರೂರ್‌ ಟಾಂಗ್‌
ಸಲಿಂಗಿ ಸಂಗಾತಿಗಾಗಿ 5 ತಿಂಗ್ಳ ಶಿಶುವನ್ನು ಕೊಂದ ನೀಚ ತಾಯಿ!
ಕೆಮಿಕಲ್‌ ಬಾಂಬ್‌ ಉಗ್ರರ ಬಂಧನ - ದಾಳಿ ಸಂಚು ರೂಪಿಸಿದ್ದ 3 ಉಗ್ರರು
ಆಗಸದಲ್ಲಿ ಸಿಂದೂರದ ವರ್ಣ ಬಿಡಿಸಿ ವಾಯು ಪಡೆ ಯೋಧರಿಗೆ ಗೌರವ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved