ಬಿಜೆಪಿಯ ಕಪಟನಾಟಕಗಳಿಗೆ ಮತದಾರನಿಂದ ತಕ್ಕಪಾಠ: ಆಂಜನೇಯಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮತದಾನ ಇನ್ನು ಕೇವಲ ೧೨ ದಿನಗಳಲ್ಲಿ ನಡೆಯಲಿದ್ದು, ಈ ಕ್ಷೇತ್ರದ ಮಾಜಿ ಸಂಸದರು, ಉತ್ತಮ ಕಾರ್ಯಗಳ ಮೂಲಕ ಹೆಸರುಗಳಿಸಿದ ದಲಿತ ಸಮೂಹದ ನಾಯಕ, ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ಪಡೆಯುವಂತೆ ಮಾಡಬೇಕೆಂದು ಮಾಜಿ ಸಚಿವ ಎಚ್.ಆಂಜಯನೇಯ ತಿಳಿಸಿದರು.