ಪ್ರತಿಯೊಬ್ಬ ವಿದ್ಯಾರ್ಥಿಯೂ ಗಿಡಗಳನ್ನು ನೆಟ್ಟು ಪೋಷಿಸಿಪ್ರತಿಯೊಬ್ಬ ವಿದ್ಯಾರ್ಥಿಯೂ ಗಿಡಗಳನ್ನು ನೆಟ್ಟು ಪೋಷಿಸಬೇಕು. ವನ್ಯಸಂಪತ್ತು ನಮಗೆ ನೈಸರ್ಗಿಕವಾಗಿ ದೇವರು ನೀಡಿದ ವರವಾಗಿದೆ. ಇತ್ತೀಚಿನ ದಿನಗಳಲ್ಲಿ ಗಿಡ, ಮರಗಳನ್ನು ನಾಶಪಡಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ. ಕಾಲೇಜಿನಲ್ಲೂ ವಿಶಾಲವಾದ ಮೈದಾನವಿದೆ. ಎಲ್ಲರೂ ಸೇರಿ ವಿವಿಧ ಹೂ, ಗಿಡಗಳನ್ನು ನೆಟ್ಟು ಕೈತೋಟ ನಿರ್ಮಿಸಿ ಪ್ರಕೃತಿಮಾತೆಗೆ ನಮಿಸೋಣವೆಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ತಿಮ್ಮಯ್ಯ ತಿಳಿಸಿದರು.