ಗಣಿಬಾಧಿತ ಪ್ರದೇಶದ ಜನರಿಗೆ ಉಚಿತ ಆರೋಗ್ಯ ಸೇವೆಚಿತ್ರದುರ್ಗ ತಾಲೂಕಿನ ಗಣಿಬಾಧಿತ ಪ್ರದೇಶಗಳಲ್ಲಿನ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಸಂಚಾರಿ ವಾಹನ ಸಜ್ಜಾಗಿದೆ. ಗಣಿಬಾಧಿತ ಪ್ರದೇಶಗಳಲ್ಲಿ ಸಂಚಾರ ಮಾಡುವ ಸಂಚಾರಿ ಆರೋಗ್ಯ ಘಟಕ ಪ್ರತಿ ದಿನ ಎರಡೆರೆಡು ಹಳ್ಳಿಗಳಲ್ಲಿ ಸಂಚರಿಸಲಿದೆ. ಸಂಚಾರಿ ಆರೋಗ್ಯ ಘಟಕದಲ್ಲಿ ವೈದ್ಯರು, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಔಷಧಿ ವಿತರಕರು ಕಾರ್ಯನಿರ್ವಹಿಸಲಿದ್ದು, ಸುಸಜ್ಜಿತ ವಾಹನ, ಆರೋಗ್ಯ ಉಪಕರಣಗಳು, ಔಷಧಿಗಳು ಲಭ್ಯ ಇರಲಿವೆ.