ಸಾವಯವ ಕೃಷಿಗೆ ಸರ್ಕಾರ ಒತ್ತು ನೀಡಲಿ: ಒಡಿಯೂರು ಶ್ರೀಮೇಳದಲ್ಲಿ 150ಕ್ಕೂ ಅಧಿಕ ಬಗೆಯ ಸೊಪ್ಪು ತರಕಾರಿಗಳು, 350ಕ್ಕೂ ಅಧಿಕ ಬಗೆಯ ಗಡ್ಡೆ ಗೆಣಸುಗಳನ್ನು ಗ್ರಾಹಕರು ಖರೀದಿಸಿದ್ದು, ಮೇಳ ಮುಗಿಯುವ ಮೊದಲೇ ಅನೇಕ ಸ್ಟಾಲ್‌ಗಳು ಖಾಲಿಯಾಗಿದ್ದವು. ಭಾನುವಾರ ಬೆಳಗ್ಗಿನಿಂದಲೇ ಗ್ರಾಹಕರ ದಂಡು ಕಂಡುಬಂದಿದ್ದು, ಸ್ಟಾಲ್‌ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ದಟ್ಟಣೆ ಉಂಟಾಗಿತ್ತು.