ಮಂಗಳೂರು- ಸುರತ್ಕಲ್: ನುಚ್ಚು ನೂರಾದ ಹೆದ್ದಾರಿ!ಕೂಳೂರು- ಬೈಕಂಪಾಡಿ- ಕುಳಾಯಿ ಪ್ರದೇಶ ಅತಿ ಹೆಚ್ಚು ಹದಗೆಟ್ಟಿದೆ. ಕಳೆದ ವರ್ಷ ಹಾಕಿದ ತೇಪೆ ರಸ್ತೆಯುದ್ದಕ್ಕೂ ಎದ್ದು ಸರ್ಕಸ್ ಮಾಡುತ್ತಾ ಸಂಚರಿಸಬೇಕು. ಇದು ಈ ಬಾರಿ ಮಾತ್ರ ಅಲ್ಲ, ಪ್ರತಿ ವರ್ಷದ ಗೋಳು. ಈಗಂತೂ ಎಂದೂ ಇಲ್ಲದಷ್ಟು ಭಾನಗಡಿ ಸೃಷ್ಟಿಯಾಗಿದೆ. ಆದರೂ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳು ಎಚ್ಚೆತ್ತ ಲಕ್ಷಣ ಕಾಣುತ್ತಿಲ್ಲ.