ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಪದ್ಮನೂರು ಈದ್ ಮಿಲಾದ್ ಸೌಹಾರ್ದ ಕೂಟಸುಮಾರು ೬೫ ವರ್ಷಗಳ ಹಿಂದೆ ಇಲ್ಲಿನ ಗ್ರಾಮಸ್ಥರು, ಸಮಾನ ಮನಸ್ಕರು ಸೇರಿ ಕಟೀಲು ಮೇಳದ ಯಕ್ಷಗಾನ ಬಯಲಾಟ ಆರಂಭಿಸಿದರು. ಈ ಸಂದರ್ಭ ಅಲ್ಲಿನ ಕ್ರ‍್ಯೆಸ್ತ ,ಮುಸ್ಲಿಂ ಬಾಂಧವರು ಕೈ ಜೋಡಿಸಿದ್ದು ಕಳೆದ ೫೮ ವರ್ಷಗಳಿಂದ ಕ್ರಿಸ್ಮಸ್ ಹಾಗೂ ೬೫ ವರ್ಷದಿಂದ ಯಕ್ಷಗಾನ ಬಯಲಾಟ ಹಾಗೂ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯುತ್ತದೆ. ೧೬ ವರ್ಷದಿಂದ ಎಲ್ಲಾ ಧರ್ಮದವರ ಸೇರುವಿಕೆಯಿಂದ ಈದ್ ಮಿಲಾದ್ ಆಚರಣೆ ನಡೆಯುತ್ತಿದೆ.