ವಿಟ್ಲ ಮುಡ್ನೂರು ಗ್ರಾಮದಲ್ಲಿ ಮಹಿಳೆಯರಿಂದ ಜಲಕ್ರಾಂತಿವಿಟ್ಲಮುಡ್ನೂರು ಗ್ರಾಮ ಪಂಚಾಯಿತಿಯಲ್ಲಿ ಚಿಗುರು ಸಂಜೀವಿನಿ ಒಕ್ಕೂಟ ಆರಂಭವಾಗಿ 3 ವರ್ಷಗಳಾಗಿದೆ. ಮನೆಯ ಕೆಲಸದಲ್ಲಷ್ಟೇ ದಿನದೂಡುತ್ತಿದ್ದ ಮಹಿಳೆಯರಿಗೆ ಒಕ್ಕೂಟದಿಂದ ಉದ್ಯೋಗದ ಅವಕಾಶ ಸಿಕ್ಕಂತಾಗಿದ್ದು, ಕೆಲವು ಸದಸ್ಯರು ಬೇಕರಿ ಉತ್ಪನ್ನ ತಯಾರಿ, ಮಲ್ಲಿಗೆ ಕೃಷಿಯಂತಹ ಸ್ವಉದ್ಯೋಗದ ಮೂಲಕ ಬದುಕು ಕಂಡುಕೊಂಡಿದ್ದಾರೆ.