ಕುಡಿಯುವ ನೀರಿಗೆ ೧೬ ಹೊಸ ಕೊಳವೆಬಾವಿ ತೆರೆಯಲು ನಿರ್ಧಾರಹಿರೇಬಂಡಾಡಿ ಮತ್ತು ಆರ್ಯಾಪು ಗ್ರಾಮ ಪಂಚಾಯಿತಿಗೆ ತಲಾ ೩ ಬೋರ್ವೆಲ್, ಅರಿಯಡ್ಕ ಪಂಚಾಯಿತಿಯ ಮಾಣಿಯಡ್ಕ ಪ್ರದೇಶಕ್ಕೆ ೧, ಕೋಡಿಂಬಾಡಿಯ ಕೊಡಿಮರದಲ್ಲಿ ೧, ಕೆಯ್ಯೂರು ಪಂಚಾಯಿತಿಯ ಬೊಳಿಕ್ಕಲದಲ್ಲಿ ೨, ಬನ್ನೂರು ಪಂಚಾಯಿತಿಗೆ ೧, ಒಳಮೊಗ್ರು ಪಂಚಾಯಿತಿಗೆ ೩ ಮಾಣಿಲ, ವಿಟ್ಲಮುಡ್ನೂರುಗಳಲ್ಲಿ ತಲಾ ೧ ಬೋರ್ ಕೊರೆಯುವ ಆವಶ್ಯಕತೆ ಬಗ್ಗೆ ಆಯಾ ಪಿಡಿಒಗಳು ಬೇಡಿಕೆ ಮುಂದಿಟ್ಟರು. ಅದರಂತೆ ಜಿಲ್ಲಾಧಿಕಾರಿಗಳಿಗೆ ಬರೆಯಲು ನಿರ್ಣಯ ಅಂಗೀಕರಿಸಲಾಯಿತು.