ಸಾಲದ ಸುಳಿಗೆ ಸಿಲುಕಿದ್ದ ಅಜ್ಜಿಗೆ ನೆರವಾದ ಶಾಸಕಮಗಳು ತನ್ನ ಹೆಸರಿನಲ್ಲಿ ಮಾಡಿದ ಸಾಲ ಮಗಳ ಅಕಾಲಿಕ ನಿಧನದ ನಂತರ ತನಗೆ ಮರುಪಾವತಿಯ ಹೊಣೆ ಬಿದ್ದು, ಕಂಗಲಾಗಿದ್ದ ಅಜ್ಜಿಯ ವ್ಯಥೆಯ ಕತೆಯನ್ನು ಆಲಿಸಿದ ಪುತ್ತೂರು ಶಾಸಕರು ಬ್ಯಾಂಕ್ ಸಾಲವನ್ನು ತಾನೇ ಮರುಪಾವತಿ ಮಾಡಿ ಅಜ್ಜಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.