ಆಳ್ವಾಸ್ ಸಂಸ್ಥೆಗಳ ಹಿಂದಿನ ಸ್ಫೂರ್ತಿ ಶಕ್ತಿ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಇನ್ನಿಲ್ಲದ.ಕ. ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಮಿಜಾರುಗುತ್ತು ಮನೆತನದಲ್ಲಿ ೧೯೧೬ರ ಆಗಸ್ಟ್ ೧೫ರಂದು ಜನಿಸಿದ ಅವರು, ಆದರ್ಶ ಕೃಷಿಕರಾಗಿ ಬದುಕು ಕಂಡವರು. ದಕ್ಷಿಣ ಕನ್ನಡದಲ್ಲಿ ಯಶಸ್ವಿಯಾಗಿ ಅಡಕೆ, ತೆಂಗು ಹಾಗೂ ಕ್ಯಾವೆಂಡಿಸ್ ಬಾಳೆ ಕೃಷಿಯನ್ನು ಪರಿಚಯಿಸಿದವರಲ್ಲಿ ಪ್ರಮುಖರಾಗಿದ್ದಾರೆ.