ಸಮ್ಮೇಳನಗಳು ಆತ್ಯತೀತವಾಗಲಿ: ಸರ್ವಾಧ್ಯಕ್ಷ ಕೆ.ಸಿದ್ದಲಿಂಗಪ್ಪಯಾವುದೇ ಸಮ್ಮೇಳನಗಳು ನಡೆಯಲಿ ಅವು ಜಾತ್ಯತೀತವಾಗಿ, ಪಕ್ಷಾತೀತವಾಗಿ, ಧರ್ಮತೀತವಾಗಿ ನಡೆದಾಗ ಅಂತಹ ಸಮ್ಮೇಳನಗಳು ಅರ್ಥಪೂರ್ಣವಾಗಿರುತ್ತವೆ ಎಂದು ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಸಿದ್ದಲಿಂಗಪ್ಪ ಹೇಳಿದರು. ಚನ್ನಗಿರಿಯಲ್ಲಿ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ರಾಜ ಕೆಂಗಪ್ಪ ನಾಯಕ ಮಹಾದ್ವಾರದ, ದಿವಂಗತ ಜಿ.ಸಿದ್ದಲಿಂಗಪ್ಪ ಗೌಡ್ರು ಮಹಾ ವೇದಿಕೆಯಿಂದ ಅಧ್ಯಕ್ಷರ ಭಾಷಣದಲ್ಲಿ ಮಾತನಾಡಿದರು.