ಜ.5ರಂದು ದಾವಣಗೆರೆ ಖೋ ಖೋ ಪ್ರೀಮಿಯರ್ ಲೀಗ್ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜ.5ರಂದು ಪಟ್ಟಣದ ಚಿರಂಜೀವಿ ಕ್ರೀಡಾ ಸಂಸ್ಥೆ, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ, ಜಿಲ್ಲಾ ಖೋ ಖೋ ಸಂಸ್ಥೆ ಆಶ್ರಯದಲ್ಲಿ ದಾವಣಗೆರೆ ಖೋ-ಖೋ ಪ್ರೀಮಿಯರ್ ಲೀಗ್ ನ ಹೊನಲು ಬೆಳಕಿನ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ 4 ತಂಡಗಳು ಭಾಗವಹಿಸಲಿವೆ ಎಂದು ಚಿರಂಜೀವಿ ಕ್ರೀಡಾ ಸಂಸ್ಥೆ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಚನ್ನಗಿರಿಯಲ್ಲಿ ಹೇಳಿದ್ದಾರೆ.