ಮಠ, ಮಂದಿರಗಳು ಅಧ್ಯಾತ್ಮ ಮೂಲ ಕೇಂದ್ರಗಳು: ಶ್ರೀ ವಿಶ್ವವಲ್ಲಭ ತೀರ್ಥರುಮಠ-ಮಂದಿರ, ದೇವಾಲಯಗಳು ಅಧ್ಯಾತ್ಮದ ಮೂಲ ಕೇಂದ್ರಗಳಾಗಿವೆ. ಪ್ರತಿಯೊಬ್ಬರು ಮಠ-ಮಂದಿರಗಳ ಬಗ್ಗೆ ಭಕ್ತಿ ಗೌರವಗಳನ್ನು ಹೊಂದಬೇಕು. ಆಗ ಹಿಂದೂ ಧರ್ಮ ಬಲಿಷ್ಠಗೊಳ್ಳುವುದು ಎಂದು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಸೋದೆ ವಾದಿರಾಜ ಮಠದ ಪ್ರಸ್ತುತ ಪೀಠಾಧಿಪತಿ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಚನ್ನಗಿರಿಯಲ್ಲಿ ನುಡಿದಿದ್ದಾರೆ.