ಶಾಸಕರಿಗೆ ಆಫರ್ ಬಂದಿದ್ದರೆ ಆಣೆ ಮಾಡಲಿ: ರೇಣುನಿಮ್ಮ ಶಾಸಕರನ್ನು ಖರೀದಿ ಮಾಡುವುದಕ್ಕೆ ಅವರೇನು ಎಮ್ಮೆ, ಕೋಣನಾ? ಶಾಸಕರ ಖರೀದಿಗೆ ₹50 ಕೋಟಿ, ₹100 ಕೋಟಿ ಆಫರ್ ಬಂದಿದೆಯೆಂಬ ಹೇಳಿಕೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ, ಶಾಸಕ ರವಿ ಗಣಿಗ ಧರ್ಮಸ್ಥಳ, ಅಜ್ಜಯ್ಯನ ಸನ್ನಿಧಿ ಅಥವಾ ಮೈಸೂರು ಶ್ರೀ ಚಾಮುಂಡೇಶ್ವರಿ ತಾಯಿ ಬಳಿ ಬಂದು, ಆಣೆ ಮಾಡಿ ಹೇಳಲಿ ಎಂದು ಬಿಜೆಪಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪಂಥಾಹ್ವಾನ ನೀಡಿದ್ದಾರೆ.