ಲೈಂಗಿಕ ದೌರ್ಜನ್ಯ: ಆರೋಪಿ ಅಮ್ಜದ್ ಮೆಡಿಕಲ್ ಶಾಪ್, ಮನೆ ಮಹಜರ್ಪಟ್ಟಣದ ಮೇಲಿನ ಬಸ್ ನಿಲ್ದಾಣದಲ್ಲಿ ಅಮರ್ ಮೆಡಿಕಲ್ ಹೆಸರಿನ ಔಷಧಿ ಅಂಗಡಿ ಇಟ್ಟುಕೊಂಡಿದ್ದ ಅಮ್ಜದ್ ಅಪ್ರಾಪ್ತ ಹೆಣ್ಣುಮಕ್ಕಳು, ಮಹಿಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಯಾಗಿದ್ದು, ಭಾನುವಾರ ಬೆಳಗ್ಗೆ ಆರೋಪಿಯನ್ನು ದಾವಣಗೆರೆ ಪೊಲೀಸರು ಚನ್ನಗಿರಿಗೆ ಕರೆತಂದು, ಆತನ ಮೆಡಿಕಲ್ ಶಾಪ್ ಮತ್ತು ವಾಸದ ಮನೆ ಶೋಧಿಸಿ, ಮಹಜರ್ ನಡೆಸಿದ್ದಾರೆ.