ಕ್ರೀಡೆ, ಜನರ ಆರೋಗ್ಯಕ್ಕಾಗಿ ಮಾತ್ರವೇ ಹೈಸ್ಕೂಲ್ ಮೈದಾನ ಮೀಸಲಿಡಿಕ್ರೀಡೆಗೆ ಮೀಸಲಾದ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಪ್ರತಿ ತಿಂಗಳಲ್ಲಿ 3-4 ಮೇಳಗಳಿಗೆ ಜಾಗ ಕೊಟ್ಟು ಕ್ರೀಡಾಭ್ಯಾಸ, ಕ್ರೀಡಾ ಸ್ಪರ್ಧೆಗಳಿಗೆ ತೊಂದರೆ ಮಾಡುತ್ತಿರುವುದನ್ನು ಖಂಡಿಸಿ ನೂರಾರು ಕ್ರೀಡಾಪಟುಗಳು ನಗರದ ಪಾಲಿಕೆ ಮುಂಭಾಗದ ಹಳೇ ಪಿ.ಬಿ. ರಸ್ತೆಯಲ್ಲಿ ಫುಟ್ಬಾಲ್, ಬಾಸ್ಕೆಟ್ ಬಾಲ್, ಕ್ರಿಕೆಟ್ ಆಡುವ ಮೂಲಕ ವಿನೂತನ ಪ್ರತಿಭಟನೆ ದಾವಣಗೆರೆಯಲ್ಲಿ ನಡೆಸಿದ್ದಾರೆ.