ಹೊಸ ವರ್ಷ: ದಾವಣಗೆರೆಯಲ್ಲಿ 8 ಕೋಟಿ ಮದ್ಯದ ಹೊಳೆ!ಹೊಸ ವರ್ಷಾಚರಣೆ ಹೆಸರಿನಲ್ಲಿ ಸುಮಾರು ₹7.26 ಕೋಟಿ ಮೌಲ್ಯದ 1.42 ಲಕ್ಷ ಲೀಟರ್ ಲಿಕ್ಕರ್ ಮದ್ಯ, ₹67.33 ಲಕ್ಷ ಮೌಲ್ಯದ 32,328 ಲೀಟರ್ ಬಿಯರ್ ಒಂದೇ ರಾತ್ರಿಯಲ್ಲಿ ನಗರ, ಜಿಲ್ಲೆಯಲ್ಲಿ ಹೊಳೆಯಂತೆ ಹರಿದಿದೆ. ಇದು ಜಿಲ್ಲೆಯಲ್ಲಿ ಹೊಸ ವರ್ಷ 2025 ಅನ್ನು ಪಾನಪ್ರಿಯರು ನಶೆಯಲ್ಲೇ ಸ್ವಾಗತಿಸಿದ ಪರಿಯಾಗಿದ್ದು, ಸರ್ಕಾರದ ಬೊಕ್ಕಸ ತುಂಬಲು ಪರೋಕ್ಷವಾಗಿ ಮದ್ಯಪ್ರಿಯರು ಅಳಿಲು ಸೇವೆ ಸಮರ್ಪಿಸಿದ್ದಾರೆ!