ಶಿವಶರಣರ ಪಥದಲ್ಲಿ ದೊಣೆಹಳ್ಳಿ ಮಠದ ಸಮಾಜ ಸೇವೆ ಶ್ಲಾಘನೀಯದೊಣೆಹಳ್ಳಿ ಶ್ರೀ ಮಠದಿಂದ ಈ ಭಾಗದಲ್ಲಿ ರೈತ ಸಮಾವೇಶ, ಮಹಿಳಾ ಸಬಲೀಕರಣ ಸಮಾವೇಶ, ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ವಧು- ವರರ ಸಮಾವೇಶ ಶರಣ ಸಂಗಮ, ಉಚಿತ ದಂತಪಂಕ್ತಿ ವಿತರಣಾ ಮತ್ತು ಜೋಡಣೆ ಕಾರ್ಯಕ್ರಮ ನಡೆಸಲಾಗಿದೆ. ಇಂಥ ಕಾರ್ಯಕ್ರಮಗಳ ಆಯೋಜಿಸಿ, ಸಮಾಜಕ್ಕೆ ಉತ್ತಮ ವೈಚಾರಿಕ ಸಂದೇಶ ನೀಡುವಲ್ಲಿ ಶ್ರೀಮಠ ಪ್ರಥಮ ಹೆಜ್ಜೆ ಶ್ಲಾಘನೀಯ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.