ನಾಲೆ ಕಾಮಗಾರಿ ಸ್ಥಗಿತ ಮಾಡಿಸಿದ್ದೇನೆ: ಸಚಿವ ಎಸ್ಸೆಸ್ಸೆಂಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ಕೈಗೊಂಡಿದ್ದ ಕಾಮಗಾರಿಯನ್ನೂ ಸಂಬಂಧಿಸಿದವರಿಗೆ ಮಾತನಾಡಿ ತಕ್ಷಣದಿಂದಲೇ ಸ್ಥಗಿತ ಮಾಡಿಸಿದ್ದೇನೆ. ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರು, ರೈತರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬಳಿ ನಿಯೋಗ ಕರೆದೊಯ್ಯುತ್ತೇನೆ. ಆ ಮೂಲಕ ಜಿಲ್ಲೆ ರೈತರ ಹಿತಕಾಯುತ್ತೇನೆ ಎಂದು ಜಿಲ್ಲೆ ಅಚ್ಚುಕಟ್ಟು ರೈತರಿಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅಭಯ ನೀಡಿದ್ದಾರೆ.