ನಗರಸಭೆ ಸಿಬ್ಬಂದಿ ವಿಳಂಬ ಧೋರಣೆಗೆ ತರಾಟೆನಗರದ ನಗರಸಭೆ ಆವರಣದಲ್ಲಿ ಖಾತಾ ಉತಾರ, ಬಿ ಖಾತಾ ಸೇರಿದಂತೆ ವಿವಿಧ ಕಾರ್ಯಗಳಿಗೆ ಆಗಮಿಸಿದ ಸಾರ್ವಜನಿಕರ ಕೆಲಸಗಳಿಗೆ ಸಿಬ್ಬಂದಿ ತಾತ್ಸಾರ, ನಿಧಾನಗತಿ ಹಾಗೂ ಸರಿಯಾದ ಮಾಹಿತಿ ನೀಡದೇ ಅಲೆದಾಡಿಸುತ್ತಿದ್ದಾರೆ. ಈ ಧೋರಣೆ ವಿರುದ್ಧ ಜನತೆ ಗುರುವಾರ ಮಧ್ಯಾಹ್ನ ನಗರಸಭೆ ಸದಸ್ಯರ ಬಳಿ ಸಮಸ್ಯೆ ಹೇಳಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.