ಯುಗಾದಿ ಚಂದ್ರದರ್ಶನ: ಬೇವು-ಬೆಲ್ಲದ ಸಂಭ್ರಮಜಿಲ್ಲಾದ್ಯಂತ ಜನತೆ ಸಂಭ್ರಮ, ಸಡಗರದಿಂದ ಯುಗಾದಿ ಹಬ್ಬ ಆಚರಿಸಿದರು. ನೂತನ ವಿಶ್ವಾವಸುನಾಮ ಸಂವತ್ಸರದ ಚಾಂದ್ರಮಾನ ಯುಗಾದಿ ಪ್ರಯುಕ್ತ ಬಹಳ ಜನರು ಭಾನುವಾರ ಅಮವಾಸ್ಯೆ ಪೂಜೆ ನೆರವೇರಿಸಿದ್ದರು. ಭಾನುವಾರ ಎಲ್ಲರ ಮನೆಗಳಲ್ಲಿ ಕೂಡ ಬೇವು-ಬೆಲ್ಲ, ಶ್ಯಾವಿಗೆ, ಕೆಲವರು ಹೋಳಿಗೆ, ಸಿಹಿ ಭೋಜನ ಸವಿದು ಸಂಭ್ರಮದಿಂದ ಯುಗಾದಿ ಆಚರಿಸಿದರು.