ಅಧಿಕಾರಕ್ಕೆ ಆಸೆಪಡದ ಶಿವಶರಣರುಶರಣರು ಆಸೆ, ಸಂಪತ್ತು, ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ, ಅನುಭವ ಅವರ ನಿತ್ಯ ಬದುಕಿನ ಸಿದ್ಧಾಂತವಾಗಿತ್ತು. ಬಸವತತ್ವ ಮತ್ತು ವಚನ ಸಾಹಿತ್ಯ ಸಂರಕ್ಷಣೆ ಮಾಡಿದ ಕೀರ್ತಿ ಶಿವಶರಣರಾದ ಅಕ್ಕ ನಾಗಮ್ಮ, ಚನ್ನಬಸವಣ್ಣ, ನುಲಿಯ ಚಂದಯ್ಯ, ಕಕ್ಕಯ್ಯ ಅವರಿಗೆ ಸಲ್ಲುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ನುಡಿದಿದ್ದಾರೆ.