ಕಾಶ್ಮೀರ ಸ್ಥಿತಿ ನೆನಪಿಸುವಂಥ ಭೀತಿ ವಾತಾವರಣಕಾರ್ಲ್ ಮಾರ್ಕ್ಸ್ ನಗರದಲ್ಲಿ ಕ್ರಿಮಿನಲ್ ಹಿನ್ನೆಲೆಯ, ಮತೀಯ ಗೂಂಡಾಗಳು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ಮಾಡಿ, ಮನೆಗಳಿಗೆ ನುಗ್ಗಿ ಮಕ್ಕಳು, ಮಹಿಳೆಯರು, ವೃದ್ಧರು, ಪುರುಷರ ಮೇಲೆ ಹಲ್ಲೆ ಮಾಡಿದ್ದಾರೆ. ಆ ಮೂಲಕ ಕಾಶ್ಮೀರ ಘಟನೆಗಳ ಸಿನಿಮಾ ನೆನಸುವಂತಹ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಹಿಂದೂ ಸುರಕ್ಷಾ ಸಮಿತಿ ಮುಖಂಡ ಸಿದ್ದಲಿಂಗ ಸ್ವಾಮಿ ದಾವಣಗೆರೆಯಲ್ಲಿ ಕಿಡಿಕಾರಿದರು.