ಚನ್ನಗಿರಿ ತಾಲೂಕಿನಲ್ಲಿ ಮಾದಕ ವಸ್ತು ಹಾವಳಿ ಮಟ್ಟಹಾಕಿಮಾದಕ ವಸ್ತುಗಳನ್ನು ಬಳಸಿ ಅಪ್ರಾಪ್ತರು, ಯುವಕರು ಕೊಲೆ, ದರೋಡೆ ಮಾಡುವುದು, ಜನರಿಗೆ ತೊಂದರೆ ನೀಡುವುದನ್ನು ಮಾಡುತ್ತಿದ್ದಾರೆ. ಅಂತಹ ಮಾದಕ ವಸ್ತು ಸಾಗಾಟಗಾರರು, ಮಾರಾಟಗಾರರು, ಬಳಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ತಂಜೀಮ್ ಉಲ್ ಮುಸ್ಲಿಮೀನ್ ಸಮಿತಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಒತ್ತಾಯಿಸಿತು.