ಮಲೇಬೆನ್ನೂರು ವಿವಿಧೆಡೆ ಸ್ವಾತಂತ್ರ್ಯ ದಿನೋತ್ಸವ: ದೇಶಭಕ್ತಿ ಗೀತೆಗಳ ಗಾಯನ, ಪ್ರತಿಭಾ ಪುರಸ್ಕಾರಮಲೇಬೆನ್ನೂರು ಪಟ್ಟಣ ಹಾಗೂ ವಿವಿಧ ಗ್ರಾಮೀಣ ಭಾಗದಲ್ಲಿ ಶುಕ್ರವಾರ ೭೯ನೇ ಸ್ವಾತಂತ್ರ್ಯ ದಿನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪುರಸಭೆ ಕಚೇರಿ ಮುಭಾಗದಲ್ಲಿ ಅಧ್ಯಕ್ಷ ಹನುಮಂತಪ್ಪ, ಹಳೇ ವೃತ್ತದಲ್ಲಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಆರಕ್ಷಕ ಠಾಣೆ ಆವರಣದಲ್ಲಿ ಪಿಎಸ್‌ಐ ಹಾರೂನ್ ಅಕ್ತರ್, ಲಯನ್ಸ್ ಭವನದಲ್ಲಿ ಅಧ್ಯಕ್ಷ ಸಿರಿಗೆರೆ ಸಿದ್ದಪ್ಪ, ಬೆಸ್ಕಾಂ ಕಚೇರಿಯಲ್ಲಿ ಶಾಖಾಧಿಕಾರಿ ಮೇಘರಾಜ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.