ಬದುಕಿನ ಸಮಸ್ಯೆಗಳ ಎದುರಿಸಿ ಬೆಳೆಯಬೇಕುಬದುಕಿನಲ್ಲಿ ಎದುರಾಗುವ ಬಡತನ, ನೋವು, ಅವಮಾನಗಳಂತಹ ಅಪಸವ್ಯಗಳ ವಿರುದ್ಧ ವಿದ್ಯಾರ್ಥಿಗಳು, ಯುವಜನರು ಪ್ರಭಲವಾದ ಪ್ರತಿರೋಧ ತೋರಿಸಿ, ಎದುರಿಸಿ ನಿಲ್ಲುವ ಛಲಗಾರಿಕೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಸಂಕಷ್ಟಗಳಿಂದ ವಿಮುಕ್ತಿ ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ಹಳೇಬೀಡು ರಾಮ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.