ಮತಾಂತರ-ವ್ಯಸನಮುಕ್ತ ಸಮಾಜ ಕಟ್ಟುವುದೇ ಗುರಿಮತಾಂತರ ಮುಕ್ತ, ವ್ಯಸನಮುಕ್ತ ಸಮಾಜ, ಆರೋಗ್ಯಯುತ ಜೀವನ, ಸಂಸ್ಕಾರ ಹಾಗೂ ಶಿಕ್ಷಣಯುತ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಾಚಿದೇವ ಜೋಳಿಗೆ ಎನ್ನುವ ಹೆಸರಿನಲ್ಲಿ ಪ್ರಮುಖವಾದ ಮೂರು ಉದ್ಧೇಶಗಳನ್ನು ಇಟ್ಟುಕೊಂಡು ಮನೆಮನೆಗೆ ಮಾಚಿದೇವ ಎನ್ನುವ ಘೋಷಣೆಯೊಂದಿಗೆ ರಾಜಾದ್ಯಂತ ಪ್ರವಾಸ ಮಾಡಲಾಗುತ್ತಿದೆ ಎಂದು ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಬಸವ ಮಾಚಿದೇವ ಮಹಾಸ್ವಾಮೀಜಿ ನುಡಿದಿದ್ದಾರೆ.