ರಾಷ್ಟ್ರಭಕ್ತಿ, ಸಂವಿಧಾನ ರಕ್ಷಕರು ಇಂದಿನ ತುರ್ತು: ಗೊರುಚಇಂದಿನ ದೇಶಕ್ಕೆ ರಾಷ್ಟ್ರನಿಷ್ಠೆ ಮತ್ತು ಸಂವಿಧಾನ ಆಶಯಗಳಿಗೆ ಬದ್ಧರಿರುವ ಜನಪ್ರತಿನಿಧಿಗಳು ಬೇಕಾಗಿದ್ದಾರೆ. ಪ್ರಜ್ಞಾವಂತ ಧರ್ಮಗುರುಗಳು, ಪ್ರಾಮಾಣಿಕ ಆಡಳಿತ ನಡೆಸುವ ಅಧಿಕಾರಿಗಳು, ಸಮರ್ಪಣಾ ಭಾವದ ಸಮಾಜ ಸೇವಕರು ಬೇಕಾಗಿದ್ದಾರೆ. ಆಮಿಷಗಳಿಗೆ ಬಲಿಯಾಗದ ಮತದಾರರು ಇಂದಿನ ತುರ್ತು ಅಗತ್ಯವಾಗಿದ್ದಾರೆ ಎಂದು ನಾಡೋಜ ಗೊ.ರು.ಚನ್ನಬಸಪ್ಪ ಹೇಳಿದ್ದಾರೆ.