ನಿಟುವಳ್ಳಿ ಸರ್ಕಾರಿ ಶಾಲೆ ಅಂದ ಹೆಚ್ಚಿಸಿದ ಶಿಕ್ಷಕತಾನು ಕೆಲಸ ಮಾಡುವ ಸರ್ಕಾರಿ ಶಾಲೆಯನ್ನು ಎಸ್ಡಿಎಂಸಿ, ಜನ ಪ್ರತಿನಿಧಿ, ಅಧಿಕಾರಿಗಳು, ಪಾಲಕರು, ಮುಖಂಡರು, ದಾನಿಗಳ ನೆರವಿನಿಂದ ಅಭಿವೃದ್ಧಿಪಡಿಸುವ ಜತೆಗೆ 257 ಮಕ್ಕಳ ಸಂಖ್ಯೆ ಇದ್ದ ಶಾಲೆಯಲ್ಲಿ 600 ಮಕ್ಕಳು ಓದುವಂತೆ ಮಾಡುವಲ್ಲಿ ಹಿರಿಯ ಶಿಕ್ಷಕರೊಬ್ಬರು ಪ್ರಮುಖ ಪಾತ್ರ ವಹಿಸುವ ಮೂಲಕ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.