ದಾವಣಗೆರೆ, ಹೊನ್ನಾಳಿಯಲ್ಲಿ ಈದ್ ಮಿಲಾದ್: ಮೆರವಣಿಗೆದಾವಣಗೆರೆ ನಗರದಲ್ಲಿ ಪ್ರವಾದಿ ಮಹಮ್ಮದ್ ಜನ್ಮದಿನ ಹಿನ್ನಲೆ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು. ಶುಕ್ರವಾರ ಹಬ್ಬದ ಹಿನ್ನೆಲೆ ನಗರದ ಪ್ರಮುಖ ರಸ್ತೆ, ವೃತ್ತಗಳನ್ನು ಹಸಿರು ತೋರಣ, ಬಂಟಿಂಗ್ಸ್ ಮತ್ತು ಬಾವುಟಗಳಿಂದ ಅಲಂಕಾರ ಮಾಡಲಾಗಿತ್ತು.