ಸೆಪ್ಟೆಂಬರ್ 9ರ ಕೊರಮ, ಲಂಬಾಣಿ ಹೋರಾಟಕ್ಕೆ ನಾವಿಲ್ಲ: ಕೊಟ್ರೇಶ ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಲಂಬಾಣಿ, ಕೊರಮ, ಭೋವಿ ಒಕ್ಕೂಟದಿಂದ ಸೆ.10ರಂದು ಹಮ್ಮಿಕೊಂಡಿರುವ ಹೋರಾಟದಲ್ಲಿ ಕೊರಚ ಸಮಾಜ ಇಲ್ಲ. ಕೊಲಂಬೋ ಹೆಸರಿನಲ್ಲಿ ಕೊರಮ, ಲಂಬಾಣಿ, ಭೋವಿ ಒಕ್ಕೂಟದ ಹೋರಾಟಕ್ಕೂ, ತಮ್ಮ ಸಮಾಜಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅಖಿಲ ಕರ್ನಾಟಕ ಕೊರಚ ಮಹಾಸಂಘದ ಜಿಲ್ಲಾ ಘಟಕ ಸ್ಪಷ್ಟಪಡಿಸಿದೆ.