ನಾಳೆ ದಾವಣಗೆರೆಯಲ್ಲಿ ಒಳಮೀಸಲಾತಿ ವಿಜಯೋತ್ಸವ: ಶಂಭುಲಿಂಗಪ್ಪದಾವಣಗೆರೆ ನಗರದ ಮಹಾನಗರ ಪಾಲಿಕೆ ಆವರಣದ ರಾಧಮ್ಮ ಚನ್ನಗಿರಿ ರಂಗಪ್ಪ ರಂಗಮಂದಿರದಲ್ಲಿ ಸೆ.13ರಂದು ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಜಗಳೂರು ತಾಲೂಕಿನಾದ್ಯಂತ ಸಮುದಾಯ ಬಾಂಧವರು ತೆರಳಲು 5 ಬಸ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಮುಖಂಡ ಶಂಭುಲಿಂಗಪ್ಪ ಹೇಳಿದ್ದಾರೆ.