ಪಾಲಿಕೆಯ ಎಫ್ಸಿ ಮುಗಿದ 115 ವಾಹನ ಜಪ್ತಿಗೆ ಸೂಚನೆದಾವಣಗೆರೆ: ಖಾಸಗಿ ವ್ಯಕ್ತಿಯೊಬ್ಬ ಯಾವುದೇ ಅಧಿಕಾರ ಇಲ್ಲದೇ, ಪಾಲಿಕೆ ಕಡತ ನಿರ್ವಹಣೆ ಮಾಡುತ್ತಿರುವ ವೀಡಿಯೋ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಯನ್ನು ತಕ್ಷಣವೇ ಇಲಾಖೆ ವಿಚಾರಣೆ ಕಾಯ್ದಿಸಿ, ಅಮಾನತು ಮಾಡುವ ಜೊತೆಗೆ ಖಾಸಗಿ ವ್ಯಕ್ತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುವಂತೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಪಾಲಿಕೆ ಆಯುಕ್ತೆ ಜಿ.ರೇಣುಕಾರಿಗೆ ತಾಕೀತು ಮಾಡಿದರು.