ರುದ್ರಭೂಮಿ ಒತ್ತುವರಿ ತೆರವಿಗೆ ರೈತ ಹನುಮೇಶಿ ಮಲ್ಲಶೆಟ್ಟಿಹಳ್ಳಿ ಆಗ್ರಹಹಿಂದೂ ರುದ್ರಭೂಮಿಯೆಂದು ಜಿಲ್ಲಾಧಿಕಾರಿಗಳು ಪಹಣಿ ಮಾಡುವಂತೆ ಆದೇಶ ನೀಡಿದ್ದು, ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಗಿದೆ. ಇದೇ ಗ್ರಾಮದ ಚನ್ನಬಸಪ್ಪ, ನಾಗರಾಜಪ್ಪ ಎಂಬುವವರು ಒತ್ತುವರಿ ಮಾಡಿಕೊಂಡಿದ್ದು, ಈಗಾಗಲೇ ಒತ್ತುವರಿ ತೆರವು ಬಗ್ಗೆ, ಸರ್ವೇ ಮಾಡಿಸಿದ್ದು, ಕಾರ್ಯನಿರ್ವಾಹಕ ಅಧಿಕಾರಿಗಳ ನ್ಯಾಯಾಲಯದಲ್ಲಿ ಆದೇಶ ಪಡೆದು ಒತ್ತುವರಿಯನ್ನು ತೆರವು ಮಾಡಿ, ಜನರ ಶವ ಸಂಸ್ಕಾರಕ್ಕೆ ಅಭಿವೃದ್ಧಿ ಪಡಿಸುವ ಮೂಲಕ ಅವಕಾಶ ಮಾಡಿಕೊಡಬೇಕು.