ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಪುರಪ್ರವೇಶವಿಶ್ವ ವಾಸವಿ ಜಗದ್ಗುರು ಮಹಾಸಂಸ್ಥಾನ, ಶ್ರೀ ವಾಸವಿ ಪೀಠಂನ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿ ಅವರ 4ನೇ ಪೀಠಾರೋಹಣ ಕಾರ್ಯಕ್ರಮ ಅಂಗವಾಗಿ ದಾವಣಗೆರೆ ಜಿಲ್ಲಾ ಆರ್ಯವೈಶ್ಯ ಬಂಧುಗಳು ಜು.10ರಂದು 'ಭಕ್ತಿ ಸಿಂಚನ' ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ಬುಧವಾರ ದಾವಣಗೆರೆಗೆ ಆಗಮಿಸಿದ ಸಮಾಜದ ಗುರುಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಮುಖಂಡರು, ಸಮಾಜ ಬಾಂಧವರು ಬೈಕ್ ರ‍್ಯಾಲಿ ಮೂಲಕ ಭಕ್ತಿಯಿಂದ ಸ್ವಾಗತಿಸಿದ್ದಾರೆ.