369 ರು. ವಿಮೆ ಸಂಕಷ್ಟ ಕಾಲಕ್ಕೆ ತಂದಿದ್ದು ₹10.15 ಲಕ್ಷ!ನಗರದ ಪಿ.ಬಿ. ರಸ್ತೆ ಶಾಖೆಯ ಕರ್ಣಾಟಕ ಬ್ಯಾಂಕ್ನಲ್ಲಿ ತನ್ನ ವೈಯಕ್ತಿಕ ಖಾತೆ ತೆರೆಯುವಾಗ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕರು ಕೇವಲ ₹369 ಮಾತ್ರ ತುಂಬಿ ಯುನಿವರ್ಸಲ್ ಸೋಂಪೋ ವಿಮೆ ಮಾಡಿಸಲು ತಿಳಿಸಿದಂತೆ ಎಲ್.ನಾಗರಾಜ್ (45) ಎನ್ನುವವರು ಈ ಹಣವನ್ನು ಪಾವತಿ ಮಾಡಿ ವಿಮಾ ಪಾಲಿಸಿ ಮಾಡಿಸಿದ್ದರು. ಆಕಸ್ಮಿಕವಾಗಿ ನಾಗರಾಜ್ ಅಪಘಾತದಲ್ಲಿ ನಿಧನ ಹೊಂದಿದ್ದರಿಂದ ಅವರ ಕುಟುಂಬಕ್ಕೆ ₹10,15,000 ಮೊತ್ತದ ಚೆಕ್ ಸೌಲಭ್ಯ ದೊರೆತಿದ್ದು, ಚಿಕ್ಕ ಹಣದ ಹೂಡಿಕೆ ಈಗ ಕುಟುಂಬಕ್ಕೆ ದೊಡ್ಡ ಆಸರೆಯಾದಂತಾಗಿದೆ.