ಅರ್ಥ ಪದಗಳಿಗೆ ಹೊರತು ಕಲೆಗಲ್ಲ: ಕೆ.ವಿ.ಸುಬ್ರಹ್ಮಣ್ಯದೃಶ್ಯಕಲೆಗೆ ಸಂಬಂಧಿಸಿದಂತೆ ಬಹುತೇಕ ನಮ್ಮೆಲ್ಲರ ಯಾವುದೇ ಮಾತು, ಬರಹ, ಕಲಾಕೃತಿ ಅಭಿವ್ಯಕ್ತಿಗಳು ಎಲ್ಲವೂ ನಮ್ಮವಲ್ಲ. ನಮ್ಮ ಹಿಂದಿನವರ, ಸಮಕಾಲೀನರ ಕೊಡುಗೆಗಳ ಪ್ರಭಾವದ ಫಲಗಳು ಅವಾಗಿವೆ. ಯಾವುದನ್ನು ಹಿಂದೆಂದೂ ಮಾಡಿರುವುದಿಲ್ಲವೋ, ಅದು ನಮ್ಮದು. ಈ ಹಿಂದೆ ಆಗಿರುವ ಯಾವುದನ್ನು ನಾವು ಕೂಡ ಮುಂದುವರಿಸಿಕೊಂಡು ಹೋಗಿರುತ್ತೇವೋ, ಅದು ನಮ್ಮದಲ್ಲ ಎಂದು ವಿಮರ್ಶಕ ಕೆ.ವಿ. ಸುಬ್ರಹ್ಮಣ್ಯ ಹೇಳಿದ್ದಾರೆ.