ಕಂದಾಯ ನಿವೇಶನ ಅಧಿಕೃತವೆಂದು ಘೋಷಿಸಿ, ಆದೇಶ ಹೊರಡಿಸಿರಾಜ್ಯದಲ್ಲಿ ಕಂದಾಯ ನಿವೇಶನಗಳನ್ನು ನಮೂನೆ-2ರಲ್ಲಿ ಅಧಿಕೃತವೆಂದು ನಮೂದಿಸಿ, ಸಕ್ರಮಗೊಳಿಸುವುದು, ಬ್ಯಾಂಕ್ ಸಾಲ ಸಿಗುವಂತೆ ಅವಕಾಶ ಮಾಡಿಕೊಡಲು ಪರಿಷ್ಕೃತ ಆದೇಶ ಹೊರಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ತು ಮುಖ್ಯ ಸಚೇತಕ ಎನ್.ರವಿಕುಮಾರ ನೇತೃತ್ವದಲ್ಲಿ ದಾವಣಗೆರೆ ಪಾಲಿಕೆ ಮಾಜಿ ವಿಪಕ್ಷ ನಾಯಕ, ಮಾಜಿ ಮೇಯರ್, ಮಾಜಿ ಸದಸ್ಯರು ನಗರಾಭಿವೃದ್ಧಿ ಸಚಿವರಿಗೆ ಮಂಗಳವಾರ ಮನವಿ ಅರ್ಪಿಸಲಾಯಿತು.