ಸಪ್ತವರ್ಣಗಳಲ್ಲಿ ಮಿಂದ ದಾವಣಗೆರೆ ಕೂಲ್ಕಾಮದಹನದ ಮಾರನೆಯ ದಿನವಾದ ಶುಕ್ರವಾರ ನಗರ ಸೇರಿದಂತೆ ಜಿಲ್ಲಾದ್ಯಂತ ಜನರು ಸಡಗರ, ಸಂಭ್ರಮದಿಂದ ಹೋಳಿ ಹಬ್ಬದಂದು ಬಣ್ಣಗಳಲ್ಲಿ ಮಿಂದೆದ್ದರು. ಕಳೆದ ರಾತ್ರಿ ಕಾಮದಹನ ಆಚರಣೆ ಮುಗಿದು ಮಾರನೆಯ ಶುಕ್ರವಾರದ ಹೋಳಿ ಹಬ್ಬಕ್ಕೆ ಜಿಲ್ಲೆಯಲ್ಲಿ ಮಕ್ಕಳು, ವಿದ್ಯಾರ್ಥಿ, ಯುವಜನರು, ಮಹಿಳೆಯರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಬೆಳ್ಳಂಬೆಳಗ್ಗೆ ಏಳುತ್ತಲೇ ಮಕ್ಕಳು ಬಣ್ಣದ ಪಾಕೆಟ್ಗಳನ್ನು ಕೈಯಲ್ಲಿ ಹಿಡಿದುಕೊಂಡು, ಮನೆಯವರಿಗೆಲ್ಲ ಬಣ್ಣ ಹಚ್ಚಲು ಶುರುಮಾಡಿದರು.