ಕೆರೆ, ಗೋಮಾಳ ಮರುಸರ್ವೇ ಬಳಿಕವೇ ಹದ್ದುಬಸ್ತು ಮಾಡಿಸರ್ಕಾರಿ ಗೋಮಾಳ, ಕೆರೆ ಒತ್ತುವರಿ ತೆರವಿಗೆ ಭೂಮಾಪನ ವೇಳೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಬೇರೆ ತಾಲೂಕು, ಜಿಲ್ಲೆಯ ಭೂಮಾಪಕರಿಂದ ಸರ್ವೇ ನಡೆಸಿ, ಸರ್ಕಾರಿ ಜಾಗ ಹದ್ದುಬಸ್ತು ಮಾಡಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ತಾಲೂಕಿನ ಕಬ್ಬೂರು ಗ್ರಾಮದ ಪರಿಶಿಷ್ಟರು, ಹಿಂದುಳಿದ ವರ್ಗದವರು ಪ್ರತಿಭಟಿಸಿದ್ದಾರೆ.