ಭಕ್ತಸಾಗರ ಮಧ್ಯೆ ಶ್ರೀ ಚನ್ನಪ್ಪಸ್ವಾಮಿಗಳ ಅದ್ಧೂರಿ ಮಹಾರಥೋತ್ಸವಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಪ್ಪಸ್ವಾಮಿಗಳ ಮಹಾರಥೋತ್ಸವ ಶುಕ್ರವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಶಹನಾಯ್, ಭಜನೆ, ಡೊಳ್ಳು, ಕೀಲು ಕುದುರೆ, ಪುರುವಂತರ ವೀರಗಾಸೆ, ಮಕ್ಕಳ ಕೋಲಾಟ ನೃತ್ಯ ಇತ್ಯಾದಿ ಕಲಾ ತಂಡಗಳು ಉತ್ಸವದಲ್ಲಿ ಗಮನ ಸೆಳೆದವು.