ನವದೆಹಲಿಯಲ್ಲಿ ಯುಎಫ್ಬಿಯು ಧರಣಿ, ಮತ ಪ್ರದರ್ಶನಬ್ಯಾಂಕುಗಳಲ್ಲಿ ಅಗತ್ಯ ನೇಮಕಾತಿ ಮಾಡಬೇಕು, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು, ಬ್ಯಾಂಕಿಂಗ್ ಕೆಲಸ ಹೊರಗುತ್ತಿಗೆ ನೀಡಬಾರದು ಎಂಬುದು ಹಲವಾರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್ಬಿಯು)ಯ ನೇತೃತ್ವದಲ್ಲಿ ಸಾವಿರಾರು ನೌಕರರು ಹಾಗೂ ಅಧಿಕಾರಿಗಳು ನವದೆಹಲಿಯ ಸಂಸತ್ ರಸ್ತೆಯಲ್ಲಿ ಧರಣಿ ನಡೆಸಲಾಯಿತು ಎಂದು ಯುಎಫ್ಬಿಯು ದಾವಣಗೆರೆ ಜಿಲ್ಲಾ ಸಮಿತಿ ಸಂಚಾಲಕ ಕೆ.ರಾಘವೇಂದ್ರ ನಾಯರಿ ತಿಳಿಸಿದ್ದಾರೆ.