ತಾಯಿಗಿಂತ ಮಿಗಿಲಾದ ದತ್ತು ಸ್ವೀಕಾರ ಕೇಂದ್ರ: ಡಾ.ಪ್ರಭಾ ಶ್ಲಾಘನೆಹೆತ್ತವಳಿಗೆ ಬೇಡವಾದ ಶಿಶುವನ್ನು ಆಕೆಗಿಂತಲೂ ಮಿಗಿಲಾಗಿ, ಪ್ರೀತಿಯಿಂದ ಆರೈಕೆ ಮಾಡುವ ಮೂಲಕ ದಾವಣಗೆರೆಯ ದತ್ತು ಸ್ವೀಕಾರ ಕೇಂದ್ರ ಮಾದರಿ ಮಾತೃತ್ವದ ಕೆಲಸ ಮಾಡುತ್ತಿದೆ. ಇಂತಹ ಕಡೆ ತಮ್ಮ ಮಕ್ಕಳ ಜನ್ಮದಿನ, ಹೊಸ ವರ್ಷ, ಹಬ್ಬ ಆಚರಿಸುವ ಮೂಲಕ ಇಲ್ಲಿನ ಮಕ್ಕಳನ್ನೂ ಸಂಭ್ರಮದಲ್ಲಿ ಭಾಗಿದಾರರಾಗಿ ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.