ಸಂವಿಧಾನ ವಿರೋಧಿ, ಕೋಮುವಾದಿ ಬಿಜೆಪಿ ಸೋಲಿಸಿದೇಶದ ಸಂವಿಧಾನ ನೀಡಿದ ಮತದಾನ ಅತ್ಯಂತ ಶ್ರೇಷ್ಠ, ಪವಿತ್ರವಾದ ಹಕ್ಕಾಗಿದೆ. ಅಂತಹ ಮತ ನೀಡುವ ಮುನ್ನ ಯಾರಿಗೆ, ಯಾತಕ್ಕಾಗಿ ಮತದಾನ ಮಾಡಬೇಕೆಂಬುದಾಗಿ ಆಲೋಚಿಸಿ, ಮತ ಚಲಾಯಿಸಬೇಕಿದೆ. ಇದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.