ಸಾಸಿವೆಹಳ್ಳಿ, ಉಬ್ರಾಣಿ ಏತನೀರಾವರಿ ಕೆರೆಗಳಿಗೆ ಶೀಘ್ರವೇ ನೀರು ಹರಿಸಬೇಕುತಾಲೂಕಿನ ಸಾಸಿವೆಹಳ್ಳಿ ಮತ್ತು ಉಬ್ರಾಣಿ ಏತನೀರಾವರಿ ಯೋಜನೆಗೆ ಒಳಪಡುವ ಎಲ್ಲ ಕೆರೆಗಳಿಗೆ ಶೀಘ್ರದಲ್ಲಿಯೇ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಖಡ್ಗ ಸಂಘ ಕಾರ್ಯಕರ್ತರು ಪಟ್ಟಣದ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಚನ್ನಗಿರಿಯಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.