ಮೋದಿಗೆ ನಾಯ್ಡು, ನಿತೀಶ್ ಶನಿಯಂತೆ ಕಾಡೋದು ನಿಶ್ಚಿತಲೋಕಸಭೆ ಚುನಾವಣೆಯಲ್ಲಿ 10-15 ಸೀಟು ಕಡಿಮೆ ಬಂದಿದ್ದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುತ್ತಿರಲಿಲ್ಲ. ಅವರಿಗೆ ಅದೃಷ್ಟವಿದ್ದು, ಮತ್ತೆ ಪ್ರಧಾನಿ ಆಗಿದ್ದಾರೆ. ಆದರೂ, ನಿತೀಶ್ ಕುಮಾರ ಹಾಗೂ ಚಂದ್ರಬಾಬು ನಾಯ್ಡು ಶನಿ ಕಾಡಿದಂತೆ ಕಾಡುವುದು ಸಹ ನಿಲ್ಲುವುದಿಲ್ಲ. ಈ ಇಬ್ಬರನ್ನೂ ಸಮಾಧಾನಪಡಿಸುವಷ್ಟರಲ್ಲೇ ಮೋದಿಗೆ ಸಾಕಾಗಿಹೋಗುತ್ತದೆ ಎಂದು ಶಾಸಕ, ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.