ಜಾತಿ ಮೀರಿದ ಚಳವಳಿ ಹುಟ್ಟುಹಾಕಿದ ಶಿವಶರಣರು12ನೇ ಶತಮಾನದ ಶರಣರು ಜಾತಿ ಮೀರಿದ ಚಳವಳಿ ಹುಟ್ಟುಹಾಕಿ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಜಾತಿವಿರೋಧಿ, ಪ್ರಭುತ್ವವಿರೋಧಿ, ಆರ್ಥಿಕ ಸಮಾನತೆ, ಲಿಂಗ ಸಮಾನತೆ, ಜನರಿಂದ ಜನರಿಗಾಗಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಹಾಗಾಗಿ, 12ನೇ ಶತಮನಾದ ವಚನ ಸಾಹಿತ್ಯ 21ನೇ ಶತಮಾನಕ್ಕೂ ಪ್ರಸ್ತುತವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಧನಂಜಯ ಬಿ.ಜೆ. ಹೊನ್ನಾಳಿಯಲ್ಲಿ ಹೇಳಿದ್ದಾರೆ.