ಅಪಾಯಕಾರಿ ಸ್ಥಿತಿಯಲ್ಲಿದೆ ಬೇಂದ್ರೆ ಭವನ!ಬೇಂದ್ರೆ ಭವನದೊಳಗೆ ಹೋದರೆ ಸಭಾಭವನ, ಬೇಂದ್ರೆ ಹೆಸರಿನ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕಚೇರಿ, ಬೇಂದ್ರೆ ಗ್ರಂಥಾಲಯ, ಬೇಂದ್ರೆ ದರ್ಶನ-ಪ್ರದರ್ಶನ ಹೊರತುಪಡಿಸಿ ಏನಿಲ್ಲ. ಸುಮಾರು 20 ವರ್ಷಗಳಿಂದ ಈ ಭವನ ಸುಣ್ಣ-ಬಣ್ಣ ಕಂಡಿಲ್ಲ. ಬೇಂದ್ರೆ ದರ್ಶನ-ಪ್ರದರ್ಶನ ಇರುವ ಮೇಲ್ಮಹಡಿ ಮಳೆಗಾಲದಲ್ಲಿ ಸೋರುತ್ತದೆ.